ದೇಶದ ಚಿನಿವಾರಪೇಟೆಯಲ್ಲಿ ಚಿನ್ನದ ಬೆಲೆ ಕಳೆದ 2 ದಿನಗಳಿಂದ ಏರಿಕೆಯಾಗುತ್ತಲೇ ಇದ್ದು, ಇಂದು 550 ರೂ ಹೆಚ್ಚಳವಾಗಿದ್ದು, ಬೆಳ್ಳಿ ಬೆಲೆ ಒಂದೇ ದಿನದಲ್ಲಿ ಬರೋಬ್ಬರಿ 4,400 ರೂ ಹೆಚ್ಚಳವಾಗಿದ್ದು, ಆಶ್ಚರ್ಯ ಮೂಡಿಸಿದೆ.
ಹೌದು, ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 46,850 ರೂ ಇದ್ದುದು ಇಂದು 47,350 ರೂ ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 51,110 ರೂ ಇದ್ದುದು 51,660 ರೂ ಆಗಿದ್ದು, ನಿನ್ನೆ 1 ಕೆಜಿ ಬೆಳ್ಳಿ 57,400 ರೂ ಇದ್ದುದು ಇಂದು 61,800 ರೂ ಆಗಿದೆ. ಇನ್ನು,ಬೆಂಗಳೂರು, ಮಂಗಳೂರು, ಮೈಸೂರಿನಲ್ಲಿ 1 ಕೆಜಿ ಬೆಳ್ಳಿ ಬೆಲೆ 66,700 ರೂ ಇದೆ.