ಮಳೆಗಾಲ ಬಂತೆಂದ್ರೆ ಸಾಕು ಸಾಲುಸಾಲು ಕಾಯಿಲೆಗಳು ದಾಳಿ ನಡೆಸಲು ತಯಾರಿ ಮಾಡುತ್ತಿರುತ್ತವೆ. ಅದನ್ನು ತಡೆಗಟ್ಟಲು ಈ ಮಾರ್ಗಗಳನ್ನು ಅನುಸರಿಸಿ:
➤ಕಲುಷಿತ ನೀರು ಹಾಗೂ ಆಹಾರ ಸೇವನೆ ಬೇಡ.
➤ಹೆಚ್ಚಾಗಿ ಬಿಸಿ ನೀರು ಕುಡಿಯಿರಿ.
➤ಬೇಯಿಸಿದ ತರಕಾರಿಗಳು ಹಾಗೂ ಹಸಿ ತರಕಾರಿಗಳನ್ನು ಸೇವಿಸಿ.
➤ವೈರಲ್ ಜ್ವರದಿಂದ ಬಳಲುತ್ತಿರುವವರಿಂದ ದೂರವಿರಿ, ಮಾಸ್ಕ್ ಧರಿಸಿಕೊಂಡರೆ ಉತ್ತಮ.
➤ಸರಿಯಾದ ಆಹಾರ ಕ್ರಮ ಅನುಸರಿಸಿ.
➤ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ.
➤ ಆಹಾರ ಸೇವಿಸುವ ಮೊದಲು ಕೈಗಳನ್ನು ತೊಳೆಯಿರಿ
➤ ಸೊಳ್ಳೆ ಕಡಿತವನ್ನು ತಡೆಗಟ್ಟಲು ಸಂಪೂರ್ಣ ಬಟ್ಟೆಗಳನ್ನು ಧರಿಸಿ
➤ ಶೀತ, ಜ್ವರ, ಕೆಮ್ಮು ಬಂದಾಗ ತಕ್ಷಣ ವೈದ್ಯರನ್ನು ಸಂಪರ್ಕ ಮಾಡಿ