ದೊಡ್ಡಪ್ಪನಿಗೆ ವಾರಸುದಾರರು ಇಲ್ಲ ಅಂದ್ರೆ, ದೊಡ್ಡಪ್ಪನಿಗೆ ಸೇರಿದ ಎಲ್ಲಾ ಆಸ್ತಿಗಳ ಖಾತೆ ಬದಲಾವಣೆ ನಿಮ್ಮ ಹೆಸರಿಗೆ ಆಗಬೇಕೆಂದು ರೆವಿನ್ಯೂ ಅಧಿಕಾರಿಗಳಿಗೆ ಅರ್ಜಿ ಕೊಡಿ. ಯಾರಾದರೂ ತಕರಾರು ಮಾಡಿದರೆ, ಅಂತಹ ವ್ಯಕ್ತಿಗಳ ವಿರುದ್ಧ ನೀವು ನ್ಯಾಯಾಲಯದಲ್ಲಿ ಹಕ್ಕು ಘೋಷಣೆಯ ದಾವೆ ಹಾಕಬಹುದು.
ನೀವು ನಿಮ್ಮ ದೊಡ್ಡಪ್ಪನ 2ನೇ ದರ್ಜೆಯ ವಾರಸುದಾರರು ಆಗಿರುವುದರಿಂದ ಅವರ ಆಸ್ತಿಗೆ ನೀವೇ ಮಾಲೀಕರು ಎಂದು ನಿಮ್ಮ ಹಕ್ಕನ್ನು ಘೋಷಿಸಿ ಎಂದು ನ್ಯಾಯಾಲಯವನ್ನು ಕೇಳಿಕೊಳ್ಳಬಹುದು.