ದಸರಾ ಮತ್ತು ಆಯುಧಪೂಜೆ ಹಿನ್ನೆಲೆ ಹೂವು,ಹಣ್ಣು ಸೇರಿ ಅಗತ್ಯ ವಸ್ತುಗಳ ಬೆಲೆ ಭಾರೀ ಏರಿಕೆಯಾಗಿದ್ದು, ಆಯುಧ ಪೂಜೆ ಹಿನ್ನೆಲೆ ಹೂವಿಗೆ ಭಾರೀ ಬೇಡಿಕೆ ಇದ್ದು, ಅಂತೆಯೇ ತರಕಾರಿಗಳ ಬೆಲೆಯೂ ದುಪ್ಪಟ್ಟಾಗಿದೆ.
ಹೌದು, ಕೆಜಿ ಹೂವಿನ ಬೆಲೆ ಈ ರೀತಿ ಇದ್ದು, ಮಲ್ಲಿಗೆ ಹೂ-1000 ಸಾವಿರ ರೂ, ಚೆಂಡು ಹೂ – 150 ರೂ, ಕನಕಾಂಬರ-3000, ಸುಗಂಧರಾಜ-400 ರೂ, ಸೇವಂತಿಗೆ-300-500 ರೂ ಇದೆ. ತರಕಾರಿಗಳೂ ಹೋಲ್ಸೇಲ್ ದರದಲ್ಲಿ 20 ರೂ ಕಡಿಮೆಗೆ ಸಿಕ್ಕರೆ, ಚಿಲ್ಲರೆಯಾಗಿ ಪಡೆದುಕೊಂಡರೆ 30 ರೂ ಹೆಚ್ಚಿಗೆ ನೀಡಬೇಕಾಗುತ್ತದೆ.