ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಕೇಂದ್ರ ಸರ್ಕಾರವು ಹೆಚ್ಚಿಸಿದ್ದು, ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕಕ್ಕೆ ಅನ್ವಯವಾಗುವಂತೆ 0.30 ಬಡ್ಡಿದರವನ್ನು ಹೆಚ್ಚಿಸಿದೆ.
ಆದ್ರೆ ಸುಕನ್ಯಾ ಸಮೃದ್ದಿ, ಎನ್ಎಸ್ಸಿ ಹಾಗೂ ಪಿಪಿಎಫ್ ಯೋಜನೆಯ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಕಿಸಾನ್ ವಿಕಾಸ್ ಪತ್ರ(ಕೆವಿಪಿ) ಯೋಜನೆಯ ಬಡ್ಡಿ ಹಾಗೂ ಅವಧಿಯನ್ನೂ ವಿಸ್ತರಣೆ ಮಾಡಲಾಗಿದ್ದು, ಕೆವಿಪಿಗೆ ಶೇ.7ರಷ್ಟು ಬಡ್ಡಿ ಸಿಗಲಿದೆ.