ಹಬ್ಬದ ಸೀಸನ್‌ಗೆ ಬಂಗಾರ ಪ್ರಿಯರಿಗೆ ಶಾಕ್ ಆಗಿದೆ. ಕಳೆದೆರಡು ದಿನಗಳಿಂದ ಏರಿಕೆ ಕಾಣುತ್ತಿದ್ದ, ಚಿನ್ನದ ಬೆಲೆಯಲ್ಲಿ ಇಂದು 650 ರೂ ಏರಿಕೆಯಾಗಿದ್ದು, ಬೆಳ್ಳಿ ಬೆಲೆಯಲ್ಲೂ ಕೂಡ ಇಂದು 1400 ರೂ ಏರಿಕೆಯಾಗಿದೆ.
ಹೌದು, 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 45,800 ರೂ ಇದ್ದುದು, ಇಂದು 46,400 ರೂ ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 49,970 ರೂ ಇದ್ದುದು, 50,620 ರೂ ಆಗಿದ್ದು, 1 ಕೆಜಿ ಬೆಳ್ಳಿ ಬೆಲೆ ಇಂದು 56400 ರೂ ಇದೆ. ರಾಜ್ಯದ ವಿವಿಧ ನಗರಗಳಾದ ಬೆಂಗಳೂರು, ಮಂಗಳೂರು, ಮೈಸೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 46,450 ರೂ, 24 ಕ್ಯಾರೆಟ್ ಚಿನ್ನದ ಬೆಲೆ 50,670 ರೂ ಇದೆ.
ಇನ್ನು, ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದ್ದು, ಚೆನ್ನೈ- 46,800 ರೂ, ಮುಂಬೈ- 46,400 ರೂ, ದೆಹಲಿ- 45,550 ರೂ, ಹೈದರಾಬಾದ್- 46,400 ರೂ, 1 ಕೆಜಿ ಬೆಳ್ಳಿ ಬೆಲೆ ಇಂದು 56400 ರೂ ಇದೆ.