ಕಪ್ಪು ಸಮುದ್ರದ ಮೂಲಕ ಉಕ್ರೇನ್ ಸೂರ್ಯಕಾಂತಿ ಎಣ್ಣೆ ರಫ್ತನ್ನು ಆಗಸ್ಟ್ ತಿಂಗಳಿಂದ ಪ್ರಾರಂಭಿಸಿದೆ. ಯುದ್ಧ ಪರಿಣಾಮ ಏಪ್ರಿಲ್ನಲ್ಲಿ ಎಣ್ಣೆ ಬೆಲೆ ಗರಿಷ್ಠ ಮಟ್ಟ ತಲುಪಿತ್ತು. ಅದಕ್ಕೆ ಹೋಲಿಸಿದರೆ ಈಗ ಬೆಲೆ ಅರ್ಧದಷ್ಟು ಕಡಿಮೆಯಾಗಿದೆ.
ಭಾರತ ಕೂಡ 1-2 ವಾರಗಳಿಂದ ಉಕ್ರೇನ್ ದೇಶದಿಂದ ಸೂರ್ಯಕಾಂತಿ ಎಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದೆ ಎಂದು ವರ್ತಕರು ಹೇಳಿದ್ದು, ದೇಶದಲ್ಲೂ ಕೂಡ ಸೂರ್ಯಕಾಂತಿ ಎಣ್ಣೆಯ ಬೆಲೆ ಇಳಿಕೆಯಾಗಬಹುದು ಎನ್ನಲಾಗಿದೆ. ಸದ್ಯ,ಈಗ 1 ಕೆಜಿ ಸೂರ್ಯಕಾಂತಿ ಎಣ್ಣೆ ಬೆಲೆ 210 ರೂ ಅಸುಪಾಸಿನಲ್ಲಿದೆ.