ಆಧಾರ್ ಕಾರ್ಡ್ಗಳನ್ನು ನೀಡುವ ಸರ್ಕಾರಿ ಸಂಸ್ಥೆಯಾದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ವಂಚನೆಗಳಿಂದ ಜಾಗೃತರಾಗಿರಿ ಎಂದು ಸಲಹೆ ನೀಡಿದೆ.
ಹೌದು, ಆಧಾರ್ ಕಾರ್ಡ್ಗೆ ಸಂಬಂಧಿಸಿದ ಮಾಹಿತಿಯನ್ನು ಯಾರಿಗೂ ನೀಡಬೇಡಿ ಎಂದು ಯುಐಡಿಎಐ ಹೇಳಿದ್ದು, ನಿಮ್ಮ ಆಧಾರ್ ಕಾರ್ಡ್ ಅನ್ನು ಹೆಚ್ಚು ಸುರಕ್ಷಿತವಾಗಿಸಲು ನೀವು ಬಯಸಿದರೆ, ನೀವು ಮಾಸ್ಕ್ಡ್ ಆಧಾರ್ ಬಳಸಬಹುದು. ಆದ್ರೆ ಈ ಇ-ಆಧಾರ್ ಡೌನ್ಲೋಡ್ ಮಾಡಲು ಸಾರ್ವಜನಿಕ ಕಂಪ್ಯೂಟರ್ ಅನ್ನು ಬಳಸಬೇಡಿ ಎಂದಿದೆ.
ಆಧಾರ್ ಕಾರ್ಡ್ ಹೊಂದಿದವರಿಗೆ ಎಚ್ಚರಿಕೆ:
ಆಧಾರ್ ಕಾರ್ಡ್ಗಳನ್ನು ನೀಡುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಸಂಸ್ಥೆ ಆಧಾರ್ ವಂಚನೆಯ ವಿರುದ್ಧ ಜಾಗರೂಕರಾಗಿರಲು ಸಲಹೆ ನೀಡಿದೆ.
☀ ಆಧಾರ್ ಕಾರ್ಡ್ ಜೆರಾಕ್ಸ್ ಅನ್ನು ಎಲ್ಲಿಯೂ ಎಸೆಯಬೇಡಿ. ಆಧಾರ್ ಪತ್ರ, ಪಿವಿಸಿ ಕಾರ್ಡ್ ಅಥವಾ ಇವುಗಳ ಜೆರಾಕ್ಸ್ ಅನ್ನು ಮನೆಯಲ್ಲಿ ಸುರಕ್ಷಿತವಾಗಿಡಿ.
☀ ಆಧಾರ್ ಕಾರ್ಡ್ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
☀ ಇ-ಆಧಾರ್ ಡೌನ್ಲೋಡ್ ಮಾಡಲು ಸಾರ್ವಜನಿಕ ಕಂಪ್ಯೂಟರ್ ಬಳಸಬೇಡಿ.
☀ ಇದು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕಳ್ಳತನಕ್ಕೆ ಒಡ್ಡಬಹುದು.
☀ ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್, ಫೇಸ್ಬುಕ್ ಇತ್ಯಾದಿಗಳಲ್ಲಿ ಆಧಾರ್ ವಿವರ ಪೋಸ್ಟ್ ಮಾಡಬೇಡಿ.
☀ ಅಪರಿಚಿತ ವ್ಯಕ್ತಿಗೆ ಆಧಾರ್ OTP ಸಂಖ್ಯೆ ನೀಡಬೇಡಿ.
☀ ನಿಮ್ಮ ಆಧಾರ್ ದುರುಪಯೋಗ ಆಗುತ್ತಿದೆ ಎಂದು ಅನಿಸಿದರೆ 1947 ಸಂಖ್ಯೆಗೆ ಕರೆ ಮಾಡಿ.