ದೇಶದಲ್ಲಿ ಪಿಎಫ್‌ಐ ಸಂಘಟನೆಯನ್ನು 5 ವರ್ಷ ಬ್ಯಾನ್ ಮಾಡಿ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿದ್ದು, ದೇಶದಲ್ಲಿ ಪಿಎಫ್ಐ ನಿಷೇಧ ಕುರಿತು ಸರ್ಕಾರ 5 ಕಾರಣ ಕೊಟ್ಟಿದೆ.
5 ಕಾರಣ ಕೊಟ್ಟ ಸರ್ಕಾರ:
*ದೇಶದ ಭದ್ರತೆಗೆ ಅಪಾಯ ತರುವ, ಕೋಮು ಸೌಹಾರ್ದತೆ & ಶಾಂತಿಗೆ ಭಂಗ ತರುವ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಿಎಫ್ಐ ತೊಡಗಿತ್ತು.
*ಉಗ್ರಗಾಮಿ ಚಟುವಟಿಕೆಗಳಿಗೆ ಬೆಂಬಲ ನೀಡಿತ್ತು.
*ಪಿಎಫ್ಐ ಸಂಸ್ಥಾಪಕರು ನಿಷೇಧಿತ ಉಗ್ರ ಸಂಘಟನೆಯ ನಾಯಕರಾಗಿದ್ದವರು. ಬಾಂಗ್ಲಾದೇಶದ ಜಮಾತ್-ಉಲ್-ಮುಜಾಹಿದೀನ್ ಜೊತೆ ನಂಟು ಹೊಂದಿದ್ದರು.
*ಐಸಿಸ್ ಮುಂತಾದ ಜಾಗತಿಕ ಭಯೋತ್ಪಾದಕರ ಜತೆ ನಂಟು.
*ದೇಶದ ನಿರ್ದಿಷ್ಟ ಸಮುದಾಯದವರನ್ನು ಮತಾಂಧಗೊಳಿಸುವ ಕೆಲಸದಲ್ಲಿ ಪಿಎಫ್ಐ ತೊಡಗಿತ್ತು.