ದೇಶದ ಚಿನಿವಾರ ಪೇಟೆಯಲ್ಲಿ 3 ದಿನಗಳಿಂದ ಯಥಾಸ್ಥಿತಿಯಲ್ಲಿದ್ದ ಚಿನ್ನದ ಬೆಲೆ ಇಂದು ಭಾರೀ ಕುಸಿತವಾಗಿದ್ದು, ಬೆಳ್ಳಿ ಬೆಲೆಯಲ್ಲಿ ಕೂಡಾ ಇಂದು 900 ರೂ ಇಳಿಕೆಯಾಗಿದೆ.
ಹೌದು, 22 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 200 ರೂ ಇಳಿಕೆಯಾಗಿ 45,800 ರೂ ಆಗಿದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 230 ರೂ ಕಡಿಮೆಯಾಗಿ 49,970 ರೂ ದಾಖಲಾಗಿದ್ದು, 1 ಕೆಜಿ ಬೆಳ್ಳಿ ಬೆಲೆ 900 ರೂ ಇಳಿಕೆಯಾಗಿ 55,400 ರೂ ಆಗಿದೆ.
ವಿವಿಧ ನಗರಗಳಲ್ಲಿ ಹೀಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 45,850 ರೂ ಆಗಿದ್ದು, 24 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 50,020 ರೂ ಇದೆ. ಇನ್ನು, ಚೆನ್ನೈ ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 46,100 ರೂ, ದೆಹಲಿ 45,950 ರೂ, ಕೊಲ್ಕತ್ತಾ 45,800 ರೂ, ಕೇರಳ 45,800 ರೂ, ಮೈಸೂರು 45,850 ಇದೆ.