ಟೀಮ್ ಇಂಡಿಯಾದಲ್ಲಿ ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರದ್ದೇ ಹವಾ. ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್ ಮತ್ತು ಶಹಬಾಸ್ ಅಹ್ಮದ್ ಬಳಿಕ ಈಗ ಮತ್ತೊಬ್ಬ ಪ್ಲೇಯರ್ ಟೀಮ್ ಇಂಡಿಯಾಗೆ ಎಂಟ್ರಿಯಾಗುವ ಸಾಧ್ಯತೆ ಇದೆ.
ಹೌದು, IPL ಸೇರಿದಂತೆ ದೇಶೀಯ ಕ್ರಿಕೆಟ್ನಲ್ಲಿ ರನ್ ಸುರಿಮಳೆ ಮಾಡುತ್ತಿರುವ ಯುವ ಬ್ಯಾಟ್ಸ್ಮನ್ ರಜತ್ ಪಾಟೀದಾರ್ ಭಾರತ ತಂಡಕ್ಕೆ ಎಂಟ್ರಿಯಾಗುವ ಸಾಧ್ಯತೆ ಇದ್ದು, ದ. ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಈತ ಆಯ್ಕೆಯಾಗಬಹುದು ಎನ್ನಲಾಗಿದೆ.
ಟಿ20 ವಿಶ್ವಕಪ್ನಿಂದಾಗಿ ಹಿರಿಯ ಆಟಗಾರರು ದಕ್ಷಿಣ ಆಫ್ರಿಕಾ ನಡುವೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗಿಯಾಗುವುದಿಲ್ಲ. ಹೀಗಾಗಿ ಟೀಂ ಇಂಡಿಯಾವನ್ನು ಶಿಖರ್ ಧವನ್ ಮುನ್ನಡೆಸಲಿದ್ದಾರೆ. ಅಷ್ಟೆ ಅಲ್ಲದೇ, IPLನಲ್ಲಿ ಉತ್ತಮ ಪ್ರದರ್ಶನ ನೀಡಿದ ಹಲವು ಆಟಗಾರರಿಗೂ ಈ ಪಂದ್ಯದಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ.