ಸಿನಿಮಾ ಲೋಕದ ಕನಸುಗಾರ, ನಟ ಕ್ರೇಜಿಸ್ಟಾರ್ ರವಿಚಂದ್ರನ್ ತಾವು ಇಷ್ಟು ಪಟ್ಟು ಕಟ್ಟಿದ ಮನೆಯನ್ನು ಖಾಲಿ ಮಾಡಿದ್ದಾರೆ.
ಹೌದು, ಮೂಲಗಳ ಪ್ರಕಾರ, ಇತ್ತೀಚೆಗೆ ನಟ ರವಿಚಂದ್ರನ್ ವೃತ್ತಿ ಜೀವನದಲ್ಲಿ ಆಗುತ್ತಿರೋ ಸೋಲುಗಳಿಗೆ ಮನೆಯ ವಾಸ್ತು ಸರಿಯಿಲ್ಲದಿರುವ ಕಾರಣಕ್ಕೆ ತಾವು ಇಷ್ಟ ಪಟ್ಟು ಕಟ್ಟಿದ ಮನೆಯನ್ನೇ ಖಾಲಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ರಾಜಾಜಿನಗರದ ರಾಜಕುಮಾರ್ ರಸ್ತೆಯಲ್ಲಿರುವ ಮನೆಯನ್ನು ಖಾಲಿ ಮಾಡಿ ನಟ ರವಿಚಂದ್ರನ್ ಇಡೀ ಕುಟುಂಬ ಬೇರೆಡೆಗೆ ತೆರಳಿದೆ ಎನ್ನಲಾಗಿದೆ.