WhatsApp ತನ್ನ ಬಳಕೆದಾರರಿಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇದೆ. ಮೊನ್ನೆ ಮೊನ್ನೆಯಷ್ಟೇ WhatsApp ಅಪ್ಲಿಕೇಷನ್ ನಲ್ಲಿ ಸಂದೇಶಗಳನ್ನು ಹುಡುಕಲು ಸಾಧ್ಯವಾಗುವಂತಹ ಹೊಸ ವೈಶಿಷ್ಟ್ಯವೊಂದರ ಬಗ್ಗೆ ತಿಳಿದುಬಂದಿತ್ತು.
ಇದೀಗ WhatsApp ಅತ್ಯದ್ಭುತ ಫೀಚರ್ ಅನ್ನು ಅಭಿವೃದ್ಧಿಪಡಿಸುತ್ತಿದ್ದು, ನೀವು ಕಳುಹಿಸಿದ ಸಂದೇಶಗಳನ್ನು ಎಡಿಟ್ ಮಾಡಬಹುದಾದ ಮತ್ತೊಂದು ಅಚ್ಚರಿಯ ವೈಶಿಷ್ಟ್ಯವೊಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಲಾಗಿದೆ. WhatsApp ಬಳಕೆದಾರರು ಈ ಫೀಚರ್ ಮೂಲಕ ಕಳುಹಿಸಿದ ಸಂದೇಶ ತಪ್ಪಾಗಿದ್ದರೆ ತಕ್ಷಣದಲ್ಲೇ ಎಡಿಟ್ ಮಾಡಲು ಇನ್ನುಮುಂದೆ ಸಾಧ್ಯವಾಗಲಿದೆ.