ಕೇರಳದ ಯುವತಿಯೊಬ್ಬಳು ಗುಂಡಿ ಬಿದ್ದ ರಸ್ತೆಯಲ್ಲಿ ತನ್ನ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದ್ದು, ಭಾರೀ ವೈರಲ್ ಆಗಿದೆ.
ಹೌದು, ಯುವತಿ ತನ್ನ ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ನ ಭಾಗವಾಗಿ ವಧುವಿನಂತೆ ಡ್ರೆಸ್ ಮಾಡಿ ಹೊಂಡ ಮತ್ತು ಮಳೆ ನೀರಿನಿಂದ ಕೊಚ್ಚೆಗುಂಡಿಯಾಗಿ ಮಾರ್ಪಟ್ಟಿದ್ದ ರಸ್ತೆಯಲ್ಲಿ ಫೋಟೋ ಶೂಟ್ ಮಾಡಿಸಿದ್ದಾಳೆ. ಹದೆಗೆಟ್ಟ ರಸ್ತೆಯ ಬಗ್ಗೆ ಸರ್ಕಾರದ ಗಮನ ಸೆಳೆಯಲು ಈ ರೀತಿ ಮಾಡಿದ್ದಾಳೆ ಎನ್ನಲಾಗ್ತಿದ್ದು, ಯುವತಿಯ ಸಾಮಾಜಿಕ ಕಳಕಳಿಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು, ತನ್ನ ಫೋಟೋಗಳನ್ನು ನೋಡಿಯಾದರೂ ಸರ್ಕಾರ ರಸ್ತೆ ಪಡಿಸಲಿ ಎಂದು ಆ ಯುವತಿ ಆಶಯ ವ್ಯಕ್ತಪಡಿಸಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ನಂತರ ಭಾರೀ ವೈರಲ್ ಆಗಿವೆ.
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ