ಕಳೆದ ಜುಲೈ ತಿಂಗಳಲ್ಲಿ ದೇಶದಲ್ಲಿ ಸೈಬರ್ ಭದ್ರತೆ ಉಲ್ಲಂಘಿಸಿದ ಮತ್ತು ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಕಾರಣಕ್ಕೆ 23 ಲಕ್ಷ whatsApp ಖಾತೆಗಳನ್ನು ಬ್ಯಾನ್ ಮಾಡಲಾಗಿದ್ದು, ಇದರ ಜೊತೆಗೆ 3 ಲಕ್ಷ ಖಾತೆದಾರರಿಗೆ ನೋಟಿಸ್ ನೀಡಲಾಗಿದೆ.
ಸರ್ಕಾರದ ವಿವಿಧ ಇಲಾಖೆಗಳು ಮತ್ತು ವಾಟ್ಸ್‌ಆ್ಯಪ್ ನಿಯಮಾವಳಿ, ಸಾಮಾಜಿಕ ತಾಣಗಳ ಬಳಕೆಯ ಮಿತಿ ಮತ್ತು ನಿರ್ಬಂಧವನ್ನು ಮೀರಿ ಕಾರ್ಯನಿರ್ವಹಿಸಿದ ಖಾತೆಗಳ ವಿರುದ್ಧ ಬಂದಿದ್ದ ದೂರಿನಂತೆ ಕ್ರಮ ಕೈಗೊಂಡಿದೆ. ಸಾಮಾಜಿಕ ಜಾಲತಾಣ ಸೇವಾದಾರ ಕಂಪನಿಗಳು ಪ್ರತಿ ತಿಂಗಳು ವರದಿ ನೀಡುವುದು ಕಡ್ಡಾಯವಾಗಿದೆ.
ಇನ್ನು, ಜೂನ್ ತಿಂಗಳ ನಿಷೇಧಕ್ಕಿಂತಲೂ ಅಧಿಕವಾಗಿದ್ದು, ಅದೇ ತಿಂಗಳು 22 ಲಕ್ಷ ಖಾತೆಗಳನ್ನು ವಾಟ್ಸ್ಆಯಪ್ ನಿಷೇಧಿಸಿತ್ತು. ಸುಳ್ಳು ಮಾಹಿತಿ ಹರಡುವಿಕೆ, ಸೈಬರ್ ಭದ್ರತೆ ಉಲ್ಲಂಘನೆ, ನಿಂದನೆ ದೂರುಗಳು ಬಂದ ಹಿನ್ನೆಲೆಯಲ್ಲಿ ಅಂತಹ ಖಾತೆಗಳನ್ನು ಹುಡುಕಿ ಬ್ಯಾನ್ ಮಾಡಲಾಗಿದೆ.