ಮಂಗಳೂರು: ಮೇಕ್ ಇನ್ ಇಂಡಿಯಾ ಬಲಪಡಿಸುವುದು ಅಗತ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ರಫ್ತು ಹೆಚ್ಚಾಗಬೇಕು. ವಿಶ್ವದಲ್ಲಿ ಸ್ಪರ್ಧಿಸಬೇಕು. ಸಾಗರ ಮಾಲಾ ಯೋಜನೆಯಿಂದ ಕರಾವಳಿ ಭಾಗದ ಶಕ್ತಿ ಹೆಚ್ಚಾಗಲಿದೆ. 8 ವರ್ಷಗಳಿಂದ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಹೇಳಿದ್ದಾರೆ.
ಇನ್ನು, ದೇಶದಲ್ಲಿ ಬಡವರಿಗಾಗಿ 3 ಕೋಟಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. 30 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಡಬಲ್ ಎಂಜಿನ್ ಸರ್ಕಾರ ಹಾಡಿಹೊಗಳಿದ ಮೋದಿ:
– ನಮ್ಮ ಡಬಲ್ ಇಂಜಿನ್ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ
– ಕರ್ನಾಟಕದ 30 ಲಕ್ಷಕ್ಕೂ ಅಧಿಕ ಮಂದಿಗೆ ಆಯುಷ್ಮಾನ್ ಭಾರತದ ಲಾಭ ಸಿಕ್ಕಿದೆ
– ಮೂಲ ಸೌಕರ್ಯಗಳ ಅಭಿವೃದ್ಧಿಯಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಒತ್ತು ನೀಡಿದ್ದೇವೆ
– ಬೆಂಗಳೂರು ಸ್ಯಾಟಲೈಟ್ ರಿಂಗ್ ರೋಡ್ ಸೇರಿ ಹಲವು ಕೆಲಸವಾಗಿದೆ
– ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿಗೆ 70 ಸಾವಿರ ಕೋಟಿ ವಿನಿಯೋಗವಾಗಿದೆ ಎಂದು ಪ್ರಧಾನಿ ಮೋದಿ ಡಬಲ್ ಎಂಜಿನ್ ಸರ್ಕಾರವನ್ನು ಹಾಡಿಹೊಗಳಿದ್ದಾರೆ.