ಕಾರ್ತಿಕ ಮಾಸದಲ್ಲಿ ಮತ್ತಷ್ಟು ಪ್ರಕೃತಿ ವಿಕೋಪ ಹೆಚ್ಚಾಗಲಿದೆ. ಜಲಗಂಡಾಂತರದಿಂದ ಭೂಮಿ ನಡುಗುತ್ತದೆ, ಬೆಂಕಿ ಅಪಘಾತಗಳು ಹೆಚ್ಚಾಗಲಿವೆ ಎಂದು ಕೋಡಿ ಮಠದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಹೌದು, ರಾಜ್ಯದಲ್ಲಿ ಎಲ್ಲಾ ಕೆರೆಗಳು ತುಂಬಿರುವ ಕಾರಣದಿಂದ ಜನರು ಖುಷಿಯಾಗಿದ್ದಾರೆ. ಆದರೆ ಇದೇ ನೀರಿನಿಂದ ಮುಂದಿನ ದಿನಗಳಲ್ಲಿ ಅಪಾಯ ಹೆಚ್ಚಾಗಲಿದೆ ಎಂದು ಕೋಡಿ ಮಠದ ಶಿವಯೋಗಿ ರಾಜೇಂದ್ರ ಶ್ರೀಗಳು ಹೇಳಿರುವುದು ಸಂಚಲನಕ್ಕೆ ಕಾರಣವಾಗಿದೆ.