ದೇಶದ ಚಿನಿವಾರ ಪೇಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಏರಿಳಿತವಾಗುತ್ತಿದ್ದು, ಚಿನ್ನದ ಬೆಲೆ ಇಂದು ಮತ್ತೆ 270 ರೂ ಇಳಿಕೆಯಾಗಿದ್ದು, ಬೆಳ್ಳಿಯ ಬೆಲೆ ಬರೋಬ್ಬರಿ 3,200 ರೂ ಕಡಿಮೆಯಾಗಿದೆ.
ಹೌದು, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 250 ರೂ ಇಳಿಕೆಯಾಗಿ 47,00 ರೂ ಆಗಿದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 270 ರೂ ಇಳಿಕೆಯಾಗಿ 51,270 ರೂ. ದಾಖಲಾಗಿದ್ದು, ಬೆಳ್ಳಿ ಬೆಲೆ ಮಾತ್ರ 1 ಕೆಜಿಗೆ ಬರೋಬ್ಬರಿ 3200 ರೂ ಕುಸಿತವಾಗುವ ಮೂಲಕ 50,800 ದಾಖಲಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೀಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 47,050 ರೂ ಆಗಿದ್ದು, ಚೆನ್ನೈ- 47,540 ರೂ. ಮುಂಬೈ- 47,000 ರೂ, ದೆಹಲಿ- 47,150 ರೂ, ಕೊಲ್ಕತ್ತಾ- 47,000 ರೂ, ಹೈದರಾಬಾದ್- 47,000 ದಾಖಲಾಗಿದೆ.