ಶುಗರ್, ಕ್ಯಾನ್ಸರ್ ಮತ್ತು ಹೃದಯದ ಚಿಕಿತ್ಸೆಗೆ ಬಳಸುವ ಅನೇಕ ಪ್ರಮುಖ ಔಷಧಿಗಳ ಬೆಲೆ ದೇಶದಲ್ಲಿ ಶೀಘ್ರವೇ ಅಗ್ಗವಾಗಬಹುದು ಎನ್ನಲಾಗಿದ್ದು, ಈ ಔಷಧಿಗಳ ಬೆಲೆಗಳನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರವು ವ್ಯಾಪಾರದ ಮಾರ್ಜಿನ್ ನಿಗದಿಪಡಿಸಲು ಸಿದ್ದತೆ ನಡೆಸಿದೆ.
ಹೌದು, ಹೆಚ್ಚು ಬಳಕೆಯಲ್ಲಿರುವ ಔಷಧಗಳ ಲಾಭದ ಮಾರ್ಜಿನ್ ಕಡಿಮೆ ಮಾಡುವ ಬಗ್ಗೆ ಕಂಪನಿಗಳ ಜೊತೆ ಮಾತುಕತೆ ನಡೆಯುತ್ತಿದೆ. ಮೊದಲ ಹಂತದಲ್ಲಿ 100 ರೂ.ಗಿಂತ ಹೆಚ್ಚಿನ ಬೆಲೆಯ ಔಷಧಗಳನ್ನು ಸೇರಿಸಲು ಫಾರ್ಮಾಸ್ಯುಟಿಕಲ್ಸ್ ಇಲಾಖೆ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರದೊಂದಿಗೆ ಮಾತುಕತೆ ನಡೆಸುತ್ತಿದೆ.
ಇದರಿಂದ 30-50% ಬೆಲೆ ಇಳಿಕೆ ಸಾಧ್ಯವಿದ್ದು, ಔಷಧಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.