ದೇಶದ ಚಿನಿವಾರ ಪೇಟೆಯಲ್ಲಿ ಕಳೆದ 2 ದಿನಗಳಿಂದ ಇಳಿಕೆಯಾಗಿದ್ದ ಚಿನ್ನದ ದರ ಶನಿವಾರ ಬೆಳಗ್ಗೆ 10 ಗ್ರಾಂಗೆ ₹440 ಏರಿಕೆಯಾಗಿದ್ದು, ಬೆಳ್ಳಿ ಬೆಲೆ ಮಾತ್ರ ₹400 ಇಳಿಕೆಯಾಗಿದೆ.
ಹೌದು, ಇಂದು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹400 ಹೆಚ್ಚಳವಾಗಿ ₹47,750 ಇದ್ದು, 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ ₹440 ಏರಿಕೆಯಾಗಿ ₹52,090 ಆಗಿದ್ದು,1 ಕೆಜಿ ಬೆಳ್ಳಿ ಬೆಲೆ ₹400 ಕಡಿಮೆಯಾಗಿ ₹58,500 ದಾಖಲಾಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹400 ಏರಿಕೆಯಾಗಿ ₹47,800 ಆಗಿದ್ದು, ಮಂಗಳೂರು, ಮೈಸೂರು- 47,800 ರೂ. ಇದೆ. ಬೆಳ್ಳಿ ಕೆಜಿ ಮೇಲೆ 58,500ರೂ ಆಗಿದೆ. ಇನ್ನು,ಚೆನ್ನೈ- 48,900 ರೂ. ಮುಂಬೈ, ಕೊಲ್ಕತ್ತಾ, ಹೈದರಾಬಾದ್- 47,750 ರೂ, ದೆಹಲಿ- 47,900 ರೂ, 47,750 ರೂ ದಾಖಲಾಗಿದೆ.