ತಲೆನೋವಿಗೆ ಮನೆಮದ್ದು:
*ಕೊಬ್ಬರಿ ಎಣ್ಣೆಗೆ ಲವಂಗದ ಎಣ್ಣೆ ಮಿಕ್ಸ್ ಮಾಡಿ ಹಣೆಗೆ ಮಸಾಜ್ ಮಾಡಿ ತಲೆನೋವು ಕಡಿಮೆಯಾಗುತ್ತದೆ.
*ನಿದ್ದೆ ಕಡಿಮೆಯಾಗಿ ತಲೆನೋವು ಬಂದಿದ್ದರೆ ಬಸಳೆ ಸೊಪ್ಪಿನ ರಸವನ್ನು ಹಣೆಗೆ ಲೇಪ ಮಾಡಿ ನಿದ್ದೆ ಮಾಡಿ ತಲೆನೋವು ನಿವಾರಣೆಯಾಗುತ್ತದೆ.
*ಶುಂಠಿ ತಲೆಯಲ್ಲಿನ ರಕ್ತನಾಳಗಳ ಉರಿಯೂತವನ್ನು ತಗ್ಗಿಸಲು ಸಹಾಯ ಮಾಡುತ್ತದೆ. ದಿನವೂ 2-3 ಬಾರಿ 2 ಚಮಚ ಶುಂಠಿ ರಸ & 2 ಚಮಚ ನಿಂಬೆ ರಸವನ್ನು ಮಿಕ್ಸ್ ಮಾಡಿ ಕುಡಿಯಬೇಕು.
*ಐಸ್ ನೀರಲ್ಲಿ ಅದ್ದಿದ ಟವಲನ್ನು ತಲೆಗೆ ಪದೇ ಪದೇ ಹಾಕಿಕೊಳ್ಳಬೇಕು. ಇನ್ನು, ತುಳಸಿ ಎಲೆಯ ರಸವನ್ನು ಶ್ರೀಗಂಧದ ಪುಡಿ ಜೊತೆ ಕಲಸಿ ಹಣೆಗೆ ಲೇಪ ಮಾಡುವುದರಿಂದ ತಲೆನೋವು ನಿವಾರಣೆಯಾಗುತ್ತದೆ