ನಿವೃತ್ತಿಯ ನಂತರ ಆರ್ಥಿಕ ತೊಂದರೆಗಳಿಲ್ಲದೆ ಜೀವನವನ್ನು ಮುಂದುವರಿಸಲು ನೀವು ಬಯಸುವಿರಾ? ಆಗಿದ್ದರೆ, ನಿಮಗೋಸ್ಕರ ಒಂದು ಅದ್ಭುತ ಯೋಜನೆ ಲಭ್ಯವಿದೆ. ಇದರ ಹೆಸರು ಅಟಲ್ ಪಿಂಚಣಿ ಯೋಜನೆ. ಈ ಯೋಜನೆಗೆ ಸೇರ್ಪಡೆಗೊಳ್ಳುವುದರಿಂದ, ನೀವು ಪ್ರತಿ ತಿಂಗಳು 5,000 ರೂಪಾಯಿಗಳನ್ನು ಅಲ್ಪ ಪ್ರಮಾಣದಲ್ಲಿ ಪಡೆಯಬಹುದು.
ಇದಕ್ಕಾಗಿ ನೀವು ಪ್ರತಿ ತಿಂಗಳು ಸ್ವಲ್ಪ ಪ್ರಮಾಣದ ಹಣವನ್ನು ಠೇವಣಿ ಮಾಡಬೇಕಾಗುತ್ತದೆ. ನೀವು ಹೂಡಿಕೆ ಮಾಡುವ ಹಣವನ್ನು ಅವಲಂಬಿಸಿ ತಿಂಗಳಿಗೆ 1000 ರಿಂದ 5000 ರೂ.ವರೆಗೂ ಪಿಂಚಣಿ ಪಡೆಯಬಹುದು. 60 ವರ್ಷದ ನಂತರ ಪ್ರತಿ ತಿಂಗಳು ನಿಮಗೆ ಈ ಹಣ ಬರುತ್ತದೆ. 60 ವರ್ಷ ದಾಟುವವರೆಗೂ ಹಣವನ್ನು ಹೂಡಿಕೆ ಮಾಡುತ್ತ ಹೋಗಬೇಕು.
18 ರಿಂದ 40 ವರ್ಷದೊಳಗಿನ ಜನರು ಈ ಯೋಜನೆಗೆ ಸೇರಬಹುದು. 18 ವರ್ಷ ವಯಸ್ಸಿನವನು ತಿಂಗಳಿಗೆ 42 ರೂ. ಪಾವತಿಸಿದರೆ, ಅವನಿಗೆ ಮಾಸಿಕ ಪಿಂಚಣಿ ಅಡಿಯಲ್ಲಿ 1,000 ರೂ. ಪಡೆಯಬಹುದು. ನೀವು 2,000 ರೂ ಪಡೆಯಲು ಬಯಸಿದರೆ, ತಿಂಗಳಿಗೆ 84 ರೂಗಳನ್ನು ಕಟ್ಟಬೇಕು. ನೀವು 5 ಸಾವಿರ ರೂ ಪಡೆಯಲು ಬಯಸಿದರೆ, ತಿಂಗಳಿಗೆ 210 ರೂ. ಕಟ್ಟಬೇಕು. ಅಂದರೆ ದಿನಕ್ಕೆ 7 ರೂ ಉಳಿತಾಯ ಮಾಡಿದರೆ ಸಾಕು.
ಅಟಲ್ ಪಿಂಚಣಿ ಯೋಜನೆಗೆ ಸೇರಿದವರು ಸಾವನ್ನಪ್ಪಿದ್ದರೆ, ಪಿಂಚಣಿ ಹಣವನ್ನು ಅವರ ಪಾಲುದಾರರಿಗೆ ನೀಡಲಾಗುವುದು. ರಿಟೈರ್ಡಮೆಂಟ್ ನಂತರ ಆರ್ಥಿಕ ತೊಂದರೆಗೊಳಗಾಗಬಗುದು. ಇಂತಹವರು ಈಗಿನಿಂದಲೇ ಸ್ವಲ್ಪ ಹಣ ಉಳಿತಾಯ ಮಾಡಬೇಕು. ಇದರಿಂದ ಪ್ರತಿ ತಿಂಗಳು ಹಣ ಬರುತ್ತದೆ.