ಮುಂಬೈ: ಮಹಾರಾಷ್ಟ್ರದ 70 ವರ್ಷದ ಅಂಧ ಮಹಿಳೆ ಕರೋನ ಕೋವಿಶೀಲ್ಡ್ ಲಸಿಕೆ ಪಡೆದ ಮೇಲೆ ಭಾಗಶಃ ಕಣ್ಣು ಕಾಣಲು ಪ್ರಾರಂಭವಾಗಿದೆ.
ಹೌದು, ಮಾಥುರಾಬಾಯಿ ಬಿಡ್ವ್ ಎಂಬ ಮಹಿಳೆ ಕಳೆದ ಒಂಬತ್ತು ವರ್ಷಗಳಿಂದ ಕುರುಡಾಗಿದ್ದಳು. ಆದರೆ ಜೂನ್ 26 ರಂದು ಕೋವಿಶೀಲ್ಡ್ ಲಸಿಕೆ ಮೊದಲ ಡೋಸ್ ಅನ್ನು ತೆಗೆದುಕೊಂಡ ನಂತರ ಅವರಿಗೆ ಶೇ.30ರಿಂದ 40ರಷ್ಟು ದೃಷ್ಟಿ ಮರಳಿರುವುದಾಗಿ ತಿಳಿದುಬಂದಿದೆ.
ಕರೋನ ಲಸಿಕೆ ಪಡೆದ 3 ದಿನದ ನಂತರದಲ್ಲಿ ನಿಧಾನವಾಗಿ ಕಣ್ಣಿನ ದೃಷ್ಟಿ ಬರಲು ಪ್ರಾರಂಭವಾಗಿದೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.