ನವದೆಹಲಿ: ಪ್ರಧಾನಿ ಮೋದಿ ಸಚಿವ ಸಂಪುಟ ವಿಸ್ತರಣೆಗೂ ಮುನ್ನ ಕೇಂದ್ರ ಸಚಿವರಾದ ಸಂತೋಷ್ ಗಂಗ್ವಾರ್, ರಮೇಶ್ ಪೋಖ್ರಿಯಾಲ್ ಹಾಗು ದೇಬಶ್ರೀ ಚೌಧರಿ ಅವರು ಇಂದು ರಾಜೀನಾಮೆ ನೀಡಿದ್ದು, ಈಗ ರಾಜ್ಯದ ಡಿವಿ ಸದಾನಂದಗೌಡ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇಂದು ಸಂಜೆ 6 ಗಂಟೆಗೆ ಘೋಷಿಸಲಿರುವ ಹೊಸ ಸಚಿವ ಸಂಪುಟದಲ್ಲಿ 43 ಹೊಸ ಮುಖಗಳಿಗೆ ಸಚಿವ ಸ್ಥಾನ ಸಿಗಲಿದ್ದು, ಇದರಲ್ಲಿ ಕರ್ನಾಟಕದಿಂದ ಸಂಸದರಾದ ಎ.ನಾರಾಯಣಸ್ವಾಮಿ ಹಾಗೂ ಶೋಭಾ ಕರಂದ್ಲಾಜೆ ಮೋದಿ ಸಂಪುಟ ಸೇರುವುದು ಪಕ್ಕಾ ಆದಂತಾಗಿದೆ.