ಮಂಡ್ಯ: ಒಟ್ಟಿಗೇ ಹುಟ್ಟಿ, ಒಟ್ಟಿಗೇ ಬೆಳೆದ ಅವಳಿ ಸಹೋದರಿಯರು ಒಟ್ಟಿಗೇ ಸಾವಿನ ಹಾದಿ ತುಳಿದ ದಾರುಣ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೌದು, ಡಿಪ್ಲೊಮಾ ಓದುತ್ತಿದ್ದ ದೀಪಿಕಾ, ದಿವ್ಯಾ ಎಂಬ 19 ವರ್ಷ ವಯಸ್ಸಿನ ಅವಳಿ ಸಹೋದರಿಯರು ಒಟ್ಟಿಗೇ ಪ್ರತ್ಯೇಕ ಕೊಠಡಿಗಳಲ್ಲಿ ನೇಣಿಗೆ ಕೊರಳೊಡ್ಡಿ ಸಾವಿಗೀಡಾಗಿದ್ದಾರೆ. ಸಾವಿಗೆ ಮದುವೆ ವಿಚಾರವೇ ಕಾರಣ ಎನ್ನಲಾಗಿದ್ದು, ಇಷ್ಟು ವರ್ಷ ಜೊತೆಗಿದ್ದ ತಮ್ಮಿಬ್ಬರನ್ನು ಬೇರೆ ಬೇರೆ ಮನೆಗೆ ಮದುವೆ ಮಾಡಿಕೊಡಲಾಗುತ್ತದೆ ಎಂದು ಮನ ನೊಂದು ಅವಳಿ ಸಹೋದರಿಯರು ಸಾವಿನ ಹಾದಿ ಹಿಡಿದಿದ್ದಾರೆ ಎನ್ನಲಾಗಿದೆ.