ದೇಶದೆಲ್ಲಡೆ ಕೊರೋನಾ 2ನೇ ಅಲೆ ನಿಧಾನವಾಗಿ ಕಡಿಮೆಯಾಗುತ್ತಿದ್ದು, ಈ ನಡುವೆ ದೇಶದಲ್ಲಿ ಈಗಾಗಲೇ ಲಸಿಕೆ ಅಭಿಯಾನ ಪ್ರಾರಂಭಗೊಂಡಿದೆ.
ಆದರೆ ಈಗ ಲಸಿಕೆ ಪಡೆಯದವರಲ್ಲೇ ಕರೋನ ವೈರಸ್ ರೂಪಾಂತರ ಆಗುತ್ತಿದ್ದು, ಈ ರೀತಿ ವೈರಸ್ ರೂಪಾಂತರಗೊಳ್ಳಲು ಹೆಚ್ಚಿನ ಅವಕಾಶ ಇರಲಿದ್ದು, ಸೋಂಕಿತರ ದೇಹವೇ ರೂಪಾಂತರದ ಕಾರ್ಖಾನೆ ಆಗಬಹುದು ಎಂದು ಸಾಂಕ್ರಾಮಿಕ ರೋಗಗಳ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಜೊತೆಗೆ ಕರೋನ ಲಸಿಕೆ ಪಡೆದವರ ದೇಹದಲ್ಲಿ ಕರೋನ ವೈರಸ್ ರೂಪಾಂತರ ಪ್ರಕ್ರಿಯೆ ಇರುವುದಿಲ್ಲ ಎಂದು ಸಾಂಕ್ರಾಮಿಕ ರೋಗಗಳ ತಜ್ಞರು ಹೇಳಿದ್ದಾರೆ.