ಬೆಂಗಳೂರು: ಮನೆಬಾಗಿಲಿಗೆ ಪಡಿತರ ಪೂರೈಕೆ ಸೇರಿದಂತೆ ಹಲವು ಇಲಾಖೆಗಳ ಸುಧಾರಣೆಗೆ ಸಂಬಂಧಿಸಿದ ವಿಸ್ತೃತ ವರದಿಯನ್ನು ಕರ್ನಾಟಕ ಆಡಳಿತ ಸುಧಾರಣಾ ಆಯೋಗದಿಂದ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಹೌದು, ಮನೆ ಬಾಗಿಲಿಗೆ ಪಡಿತರ ಪೂರೈಕೆ, ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆ, ಪಡಿತರ ಚೀಟಿ ಡೇಟಾಬೇಸ್ ನೊಂದಿಗೆ ಸಂಯೋಜನೆ, 800 ಆನ್ಲೈನ್ ಸೇವೆಗಳಿಗೆ ಏಕಗವಾಕ್ಷಿ ಏಜೆನ್ಸಿ ರಚನೆ, ಬೆಂಗಳೂರು ಒನ್ ಕರ್ನಾಟಕವನ್ನು ಗ್ರಾಪಂ ಸೇವಾ ಕೇಂದ್ರಗಳ ಮೂಲಕ ಸೇವೆಗಳು ಲಭ್ಯವಿರಬೇಕು ಎಂದು ಹೇಳಿದ್ದು, RTO ಕಚೇರಿ ಪೇಪರ್ ಲೆಸ್ ಆಗಬೇಕೆಂದು ಕರ್ನಾಟಕ ಸುವರ್ಣ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿದೆ.