ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಮತ್ತೊಂದು ಸಂಚಲನ ಘೋಷಣೆ ಮಾಡಿದೆ. ಗ್ರಾಹಕರಿಗೆ ಹೊಸ ಸೇವೆಗಳನ್ನು ತಂದಿದ್ದು, ತುರ್ತು ಡೇಟಾ ಸಾಲ ಸೌಲಭ್ಯವನ್ನು ಪರಿಚಯಿಸುತ್ತದೆ. ಇದರಿಂದ ಅನೇಕ ಜಿಯೋ ಗ್ರಾಹಕರಿಗೆ ಪ್ರಯೋಜನವನ್ನು ಪಡೆಯಬಹುದು.
ರಿಲಯನ್ಸ್ ಜಿಯೋ ಗ್ರಾಹಕರು ಈಗ ಸಾಲದ ಮೂಲಕ ತ್ವರಿತ ಡೇಟಾವನ್ನು ಪಡೆಯಬಹುದು. ಹಣವನ್ನು ನಂತರ ಪಾವತಿಸಿದರೆ ಸಾಕು. ಡೇಟಾ ಮುಗಿದ ತಕ್ಷಣ ಮತ್ತೆ ಹೆಚ್ಚಿನ ವೇಗದ ಡೇಟಾವನ್ನು ಪಡೆಯಬಹುದು. ದೈನಂದಿನ ಡೇಟಾ ಮಿತಿ ಮುಗಿದ ನಂತರ ಗ್ರಾಹಕರಿಗೆ ರೀಚಾರ್ಜ್ ಮಾಡಲು ಸಾಧ್ಯವಾಗದಿದ್ದರೆ, ಅವರು ತಕ್ಷಣ ಸಾಲ ಸೌಲಭ್ಯವನ್ನು ಪಡೆಯಬಹುದು.
ಜಿಯೋ ಗ್ರಾಹಕರಿಗೆ 5 ಎಮರ್ಜನ್ಸಿ ಡೇಟಾ ಲೋನ್ ಪ್ಯಾಕ್ಗಳನ್ನು ಲಭ್ಯಗೊಳಿಸಿದ್ದು, ಜಿಯೋ ಬಳಕೆದಾರರು ಮೈ ಜಿಯೋ ಅಪ್ಲಿಕೇಶನ್ಗೆ ಹೋಗಿ, ಅಲ್ಲಿ ಎಮರ್ಜನ್ಸಿ ಡೇಟಾ ಲೋನ್ (ತುರ್ತು ಡೇಟಾ ಸಾಲ) ಅಪ್ಷನ್ ಆಯ್ಕೆ ಮಾಡಬೇಕು. ಈ ಆಯ್ಕೆಯು ಮೊಬೈಲ್ ಸೇವೆಗಳಲ್ಲಿ ಕಾಣಿಸುತ್ತದೆ.