ನವದೆಹಲಿ: ಕರೋನ ಎರಡನೇ ಅಲೆ, ಇನ್ಮುಂದೆ ಗರ್ಭಿಣಿಯರು ಕೂಡ ಕೊರೋನಾ ಲಸಿಕೆಯನ್ನು ಪಡೆಯಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಹೌದು, ಈ ಮೊದಲು ಬಾಣಂತಿಯರು ಕರೋನ ಲಸಿಕೆ ಪಡೆಯಲು ಒಪ್ಪಿಗೆ ನೀಡಲಾಗಿತ್ತು. ಇದೀಗ, ಗರ್ಭಿಣಿಯರು ಕೂಡ ಲಸಿಕೆ ಪಡೆಯಬಹುದು ಎಂದು ರಾಷ್ಟ್ರೀಯ ಲಸಿಕಾ ತಾಂತ್ರಿಕ ಸಲಹಾ ತಂಡ ಶಿಫಾರಸು ಮಾಡುವ ಮೂಲಕ ಕೇಂದ್ರ ಒಪ್ಪಿಗೆ ನೀಡಿದೆ.
ಈ ಕುರಿತು ಮಾತನಾಡಿದ ಐಸಿಎಂಆರ್ ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ ಅವರು, ಕರೋನ 2ನೇ ಅಲೆಯಲ್ಲಿ ಗರ್ಭಿಣಿಯರು ತೀವ್ರ ಪರಿಣಾಮಕ್ಕೊಳಗಾಗಿದ್ದಾರೆ ಎಂದು ಹೇಳಿದ್ದು, ಈಗ ಅವರೂ ಕೂಡ ಲಸಿಕೆ ಪಡೆಯಬಹುದೆಂದು ಹೇಳಿದ್ದಾರೆ.