ನವದೆಹಲಿ: ದೇಶದ ಪ್ರಮುಖ ಹೈನೋತ್ಪನ್ನ ಕಂಪನಿಯಾದ ಅಮುಲ್ ದೇಶಾದ್ಯಂತ ಹಾಲಿನ ದರ ಲೀಟರ್ಗೆ 2 ರೂ. ಹೆಚ್ಚಿಸುವುದಾಗಿ ತಿಳಿಸಿದ್ದು, ಎಲ್ಲಾ ಬ್ರ್ಯಾಂಡ್ ಗಳ ಮೇಲೆ 2 ರೂ. ಹೆಚ್ಚಳವಾಗಲಿದ್ದು, ಇಂದಿನಿಂದ ಹೊಸ ದರ ಅನ್ವಯವಾಗಲಿದೆ.
ಹೌದು, ಉತ್ಪಾದನಾ ವೆಚ್ಚದಲ್ಲಿನ ಹೆಚ್ಚಳದಿಂದಾಗಿ ಸುಮಾರು ಒಂದು ವರ್ಷ ಮತ್ತು ಏಳು ತಿಂಗಳ ನಂತರ ಹಾಲಿನ ಬೆಲೆಯಲ್ಲಿ ಏರಿಕೆ ಮಾಡಲಾಗುತ್ತಿದೆ ಎಂದು ದೇಶದ ಪ್ರಮುಖ ಹೈನೋತ್ಪನ್ನ ಕಂಪನಿಯಾದ ಅಮುಲ್ ತಿಳಿಸಿದೆ. ಇನ್ನು, ಕೆಎಂಎಫ್ ನಂದಿನಿ ತುಪ್ಪ, ಬೆಣ್ಣೆ ಹಾಗೂ ಹಾಲಿನ ಪುಡಿಯ ಬೆಲೆಯನ್ನು ಕಡಿಮೆ ಮಾಡಿದೆ.