ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳಿ ನಿಯಮಿತ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ್ದು, ಕೋವಿಡ್ ಕಾಲದಲ್ಲಿ ನಂದಿನಿ ತುಪ್ಪ, ಬೆಣ್ಣೆ ಹಾಗೂ ಹಾಲಿನ ಪುಡಿ ಉತ್ಪನ್ನಗಳ ಮಾರಾಟ ದರವನ್ನು ಇಳಿಕೆ ಮಾಡಿದೆ.
ಹೌದು, ಕೋವಿಡ್ ಸಮಯದಲ್ಲಿ ಗ್ರಾಹಕರಿಗೆ ಅನುಕೂಲವಾಗಲೆಂದು ನಂದಿನಿ ತುಪ್ಪ, ಬೆಣ್ಣೆ ಹಾಗೂ ಹಾಲಿನ ಪುಡಿ ಉತ್ಪನ್ನಗಳ ಮಾರಾಟ ದರವನ್ನು ಇಳಿಕೆ ಮಾಡಿದೆ. ಅದರಂತೆ 1 ಕೆಜಿ ನಂದಿನಿ ತುಪ್ಪದ ದರ 470 ರೂ. ಇತ್ತು. ಇದನ್ನು 450 ರೂ.ಗಳಿಗೆ ಇಳಿಕೆ ಮಾಡಲಾಗಿದೆ. ಒಂದು ಕೆಜಿ ಬೆಣ್ಣೆಯ ದರ 440 ರೂ ಇತ್ತು. ಅದನ್ನು 420 ರೂ.ಗಳಿಗೆ ಇಳಿಸಲಾಗಿದೆ. ನಂದಿನಿ ಕೆನೆರಹಿತ ಹಾಲಿನ ಪುಡಿಯ ದರವನ್ನು 300 ರೂ.ನಿಂದ 270 ರೂ.ಗಳಿಗೆ ಇಳಿಕೆ ಮಾಡಲಾಗಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಂಡು ರೈತರಿಗೆ ನೆರವಾಗಬೇಕು ಎಂದು ಕೆಎಂಎಫ್ ಮನವಿ ಮಾಡಿದೆ.
ಇನ್ನು, ಕರೋನ ಮೊದಲ ಅಲೆಯ ವೇಳೆಯಲ್ಲಿ ಜನರಿಗೆ ನಂದಿನಿ ಪನ್ನೀರ್ ಜೊತೆ ಚೀಸ್ ಅನ್ನು ಉಚಿತವಾಗಿ ನೀಡಲಾಗಿತ್ತು.