ಇತ್ತೀಚೆಗೆ ಬೆನ್ನು ನೋವು, ಸೊಂಟ ನೋವು ಎನ್ನುವುದು ಎಲ್ಲರನ್ನೂ ಕಾಡುವ ಸಾಮಾನ್ಯ ಆರೋಗ್ಯ ಸಮಸ್ಯೆ ಆಗಿದ್ದು, ಅದರಲ್ಲೂ ಕರೋನ ಹಿನ್ನಲೆ ವರ್ಕ್ ಫ್ರಮ್ ಹೋಮ್ ಜಾರಿಯಾದ ಮೇಲೆ ಇವುಗಳ ಪರಿಣಾಮ ಹೆಚ್ಚಾಗಿದ್ದು, ಹೆಚ್ಚಿನ ಜನರು ಬೆನ್ನು ನೋವಿನಿಂದಾಗಿ ಬಳಲುತ್ತಿದ್ದಾರೆ. ಗಂಟೆಗಳ ಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದು ಬೆನ್ನು ನೋವಿಗೆ ಮುಖ್ಯ ಕಾರಣವಾಗಿದೆ.
ಬೆನ್ನು ನೋವಿಗೆ ಉತ್ತಮ ಭಂಗಿಯಲ್ಲಿ ಕೂರುವುದು ಮೊದಲ ಪರಿಹಾರವಾಗಿದ್ದು, ಉಳಿದಂತೆ ವ್ಯಾಯಾಮ & ಯೋಗ-ಧ್ಯಾನ ಅಭ್ಯಾಸ ಮಾಡಿಕೊಳ್ಳಬೇಕು. ಪೌಷ್ಟಿಕ ಆಹಾರ ಸೇವಿಸಿ ಅರೋಗ್ಯ ವೃದ್ಧಿಸಿಕೊಳ್ಳಬೇಕು.
ಬೆನ್ನು ನೋವಿನ ಉಪಶಮನಕ್ಕಾಗಿ ಸರಳ ವಿಧಾನ:
* ಕ್ಯಾರೆಟ್ ಸೇವನೆಯಿಂದ ವಿಟಮಿನ್ ಮತ್ತು ಪೋಷಕಾಂಶಗಳು ಅಧಿಕವಾಗಿ ದೊರಕುವುದರಿಂದ ಬೆನ್ನು ನೋವನ್ನು ಕಡಿಮೆ ಮಾಡುತ್ತದೆ.
* ಗೆಣಸು ತಿನ್ನುವುದರಿಂದ ಬೆನ್ನು ನೋವನ್ನು ಕ್ರಮೇಣ ಕಡಿಮೆ ಮಾಡುವುದರ ಜತೆಗೆ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿ ಸಿಗುತ್ತದೆ.
* ಇನ್ನು, ಬಾದಾಮಿ ಮತ್ತು ಗೋಡಂಬಿಯನ್ನು ಪ್ರತಿದಿನ ಸೇವಿಸುವುದರಿಂದ ಕೂಡ ಬೆನ್ನು ನೋವು ಕಡಿಮೆಯಾಗುತ್ತದೆ.