ನವದೆಹಲಿ: ಇ-ಕಾಮರ್ಸ್ (ಆನ್ ಲೈನ್ ಶಾಪಿಂಗ್) ವ್ಯವಸ್ಥೆಯಲ್ಲಿನ ವ್ಯಾಪಕವಾದ ಮೋಸ ಮತ್ತು ಅನ್ಯಾಯಗಳನ್ನು ತಡೆಯಲು ಕೇಂದ್ರ ಸರ್ಕಾರ ಗ್ರಾಹಕ ಸಂರಕ್ಷಣೆ (ಇ-ಕಾಮರ್ಸ್) 2020 ಕಾಯ್ದೆಗೆ ಹಲವಾರು ಬದಲಾವಣೆಗಳನ್ನು ಪ್ರಸ್ತಾಪಿಸಿದೆ.
ಹೌದು, ಇ-ಕಾಮರ್ಸ್ ತಾಣಗಳಲ್ಲಿ ಗ್ರಾಹಕರಿಗೆ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿ ಉತ್ಪನ್ನ ಮಾರಾಟ ಮಾಡುವುದು, ಫ್ಲ್ಯಾಶ್ ಸೇಲ್ ಹೆಸರಿನಲ್ಲಿ ವಂಚನೆ ಮಾಡುವುದನ್ನು ತಡೆಯುವ ಉದ್ದೇಶದಿಂದ ‘ಗ್ರಾಹಕರ ಸಂರಕ್ಷಣೆ ನಿಯಮ – 2020’ಕ್ಕೆ ಕೆಲವು ಬದಲಾವಣೆಗಳನ್ನು ತರುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದೆ.
ಈ ಬಗ್ಗೆ ಅದು ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಿದ್ದು, ಸಾರ್ವಜನಿಕರು ತಮ್ಮ ಅನಿಸಿಕೆಗಳನ್ನು js-ca@nic.in ವಿಳಾಸಕ್ಕೆ ಇ-ಮೇಲ್ ಮೂಲಕ ತಿಳಿಸಬಹುದು.