ಬೆಂಗಳೂರು: ರಾಜ್ಯ ಸರ್ಕಾರ ನೀಡಿರುವ ಸಾವಿನ ಲೆಕ್ಕಕ್ಕಿಂತ 6 ಪಟ್ಟು ಹೆಚ್ಚು ಜನರು ಕೊರೋನ ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದಾರೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ.
ಹೌದು, ರಾಜ್ಯದಲ್ಲಿ 2020ರ ಏಪ್ರಿಲ್‌ನಿಂದ 2021ರ ಮೇ ಅಂತ್ಯದವರೆಗೆ 29,090 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಆದರೆ, ನಾಗರಿಕ ನೋಂದಣಿ ವ್ಯವಸ್ಥೆ ನೀಡಿರುವ ಅಂಕಿ-ಅಂಶಗಳ ಪ್ರಕಾರ, ಇದು 5.80 ಪಟ್ಟು ಹೆಚ್ಚಾಗಿದ್ದು, ರಾಜ್ಯದಲ್ಲಿ 1,67,788 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.