ನವದೆಹಲಿ: CBSE 12ನೇ ತರಗತಿ ಬೋರ್ಡ್ ಪರೀಕ್ಷೆ 2021ರ ಫಲಿತಾಂಶಗಳನ್ನು ಜುಲೈ 31 ರೊಳಗೆ ಘೋಷಿಸಲಾಗುವುದು ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಹೌದು, ಮೌಲ್ಯಮಾಪನ ನೀತಿಗೆ ಅನುಗುಣವಾಗಿ ಮಾಡಿದ ಫಲಿತಾಂಶಗಳ ಲೆಕ್ಕಾಚಾರಕ್ಕೆ ಸಂಬಂಧಿಸಿದ ವಿವಾದವನ್ನು ಸಿಬಿಎಸ್ಇ ರಚಿಸಿದ ಸಮಿತಿಗೆ ಕಳುಹಿಸಲಾಗುವುದು. ಫಲಿತಾಂಶದ ಬಳಿಕ ಅಭ್ಯರ್ಥಿಗಳು ತಮ್ಮ ಫಲಿತಾಂಶದಿಂದ ತೃಪ್ತರಾಗದಿದ್ದರೆ, ಪರೀಕ್ಷೆ ನೋಂದಣಿಗಾಗಿ ಆನ್ ಲೈನ್ ಸೌಲಭ್ಯ ಒದಗಿಸುವುದಾಗಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಹೇಳಿದೆ.