ಚಿತ್ರದುರ್ಗ: ಆಂಬುಲೆನ್ಸ್ ಮತ್ತು ಸ್ಕೂಟಿ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಹೊರವಲಯದ ಹೊಳಲ್ಕೆರೆ ರಸ್ತೆಯ ತಿರುಮಲ ಡಾಬಾ ಬಳಿ ರಾತ್ರಿ ನಡೆದಿದೆ.
ಹೌದು, ಆಂಬುಲೆನ್ಸ್ ಗುದ್ದಿದ ರಭಸಕ್ಕೆ ಮೂವರು ಯುವಕರ ದೇಹ ಒಂದೊಂದು ಕಡೆ ಬಿದ್ದಿದ್ದು, ಕಾಂತರಾಜ (22), ಶ್ರೀಕಾಂತ (20), ನಂಜುಂಡ (20) ಮೃತ ದುರ್ದೈವಿಗಳಾಗಿದ್ದು, ಆಂಬುಲೆನ್ಸ್ ಚಾಲಕ ಗಾಯಗೊಂಡಿದ್ದಾರೆ. ಇನ್ನು, ಈ ಭೀಕರ ಅಪಘಾತಕ್ಕೆ ಆಂಬುಲೆನ್ಸ್ ಚಾಲಕನ ಅತಿವೇಗ ಕಾರಣ ಎನ್ನಲಾಗಿದೆ.