ಬಳ್ಳಾರಿ: ಕಚ್ಚಿದ ಹಾವನ್ನು ಹಿಡಿದುಕೊಂಡೇ ಯುವಕನೋರ್ವ ಆಸ್ಪತ್ರೆಗೆ ಬಂದಿರುವ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಉಪ್ಪಾರಳ್ಳಿ ಗ್ರಾಮದಲ್ಲಿ ನಡೆದಿದೆ.
ಹೌದು, ಇಂದು ಮುಂಜಾನೆ ಮನೆಯಲ್ಲಿ ಮಲಗಿದ್ದ ವೇಳೆ ಕಾಡಪ್ಪ ಎಂಬುವನ ಕಾಲಿಗೆ ಹಾವು ಕಚ್ಚಿದ್ದು, ತಕ್ಷಣ ಎಚ್ಚರಗೊಂಡ ಕಾಡಪ್ಪ ಪಕ್ಕದಲ್ಲಿದ್ದ ಹಾವನ್ನು ಹಿಡಿದುಕೊಂಡು ಆಸ್ಪತ್ರೆಗೆ ಬಂದಿದ್ದಾನೆ.
ಇನ್ನು, ಆಸ್ಪತ್ರೆಯಲ್ಲಿದ್ದ ವೈದ್ಯರು ಕಾಡಪ್ಪ ಎಂಬುವನ ಕೈಯಲ್ಲಿ ಇದ್ದ ಹಾವನ್ನು ಭಯಭೀತರಾಗಿದ್ದಾರೆ. ಬಳಿಕ ವೈದ್ಯರು ಕಾಡಪ್ಪನ ಕೈಯಲ್ಲಿ ಇದ್ದ ಹಾವನ್ನು ಬಿಡಿಸಿ ಚಿಕಿತ್ಸೆ ನೀಡಿದ್ದಾರೆ.