BMTC ನೌಕರಗೆ ಭರ್ಜರಿ ಸಿಹಿಸುದ್ದಿ; 1 ಕೋಟಿ ವಿಮಾ ಸೌಲಭ್ಯ, 10 ಲಕ್ಷ ಸಹಾಯಧನ!

Vijayaprabha

ಬಿಎಂಟಿಸಿ ನೌಕರರಿಗೆ ವಿಮೆ: ಅಪಘಾತದಿಂದ ಮೃತಪಡುವ KSRTC ಸಿಬ್ಬಂದಿಯ ಕುಟುಂಬಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜಾರಿಗೊಳಿಸಿದ್ದ ₹1 ಕೋಟಿ ವಿಮಾ ಸೌಲಭ್ಯವನ್ನು ರಾಜ್ಯ ಸರ್ಕಾರ, ಬೆಂಗಳೂರು ಮಹಾ ಸಾರಿಗೆ ಸಂಸ್ಥೆ (BMTC) ನೌಕರರಿಗೂ ವಿಸ್ತರಿಸಿದೆ.

ಇದನ್ನು ಓದಿ: ನಿಮ್ಮ ಖಾತೆಗೆ 2,000 ರೂ ಹಣ ಜಮಾ..ಚೆಕ್‌ ಮಾಡಿ

ಹೌದು, KSRTC ಸಿಬ್ಬಂದಿಯ ಕುಟುಂಬಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜಾರಿಗೊಳಿಸಿದ್ದ ₹1 ಕೋಟಿ ವಿಮಾ ಸೌಲಭ್ಯವನ್ನು ರಾಜ್ಯ ಸರ್ಕಾರ, ಬೆಂಗಳೂರು ಮಹಾ ಸಾರಿಗೆ ಸಂಸ್ಥೆ (BMTC) ನೌಕರರಿಗೂ ವಿಸ್ತರಿಸಿದ್ದು, ಬಿಎಂಟಿಸಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಅಪಘಾತದಲ್ಲಿ ಮೃತಪಟ್ಟಲ್ಲಿ ಅವಲಂಬಿತರಿಗೆ ₹1 ಕೋಟಿ ವಿಮಾ ಸೌಲಭ್ಯ ದೊರೆಯುವಂತೆ ಆರ್ಥಿಕ ಭದ್ರತೆ ಕಲ್ಪಿಸಿದ್ದು, ಅನಾರೋಗ್ಯದಿಂದ ಮೃತಪಟ್ಟರೆ ಅವರ ಕುಟುಂಬದವರಿಗೆ ₹10 ಲಕ್ಷ ಸಹಾಯಧನ ನೀಡಲಾಗುತ್ತದೆ.

1 crore insurance facility and 10 lakh subsidy for BMTC employees

ಬಿಎಂಟಿಸಿ ನೌಕರರಿಗೆ 10 ಲಕ್ಷ ವಿಮೆ

ಇನ್ನು, ಗುಂಪು ವಿಮಾ ಯೋಜನೆಗಾಗಿ ಬಿಎಂಟಿಸಿ ಸಿಬ್ಬಂದಿ ವೇತನದಿಂದ ಪಡೆಯಲಾಗುತ್ತಿದ್ದ ಮಾಸಿಕ ವಂತಿಗೆಯನ್ನ 70 ರೂ.ಗಳಿಂದ 350 ರೂ.ಗಳಿಗೆ ಹೆಚ್ಚಿಸಲಾಗಿದೆ.

ಸಿಬ್ಬಂದಿಗಳು ಕರ್ತವ್ಯದ ವೇಳೆ ಮೃತಪಟ್ಟರೆ 3 ಲಕ್ಷ ಪರಿಹಾರ ನೀಡಲಾಗುತ್ತಿತ್ತು, 2023ರ ನವೆಂಬರ್ ನಂತರವದನ್ನು 10 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಜೊತೆಗೆ ಅಪಘಾತದಲ್ಲಿ ಮೃತಪಟ್ಟರೆ 50 ಲಕ್ಷ ಪರಿಹಾರ ನೀಡಲಾಗುತ್ತಿದೆ. ಹಾಗಾಗಿ ವಂತಿಗೆ ಹೆಚ್ಚಿಸಲಾಗಿದೆ, ನಿಗಮವೂ ಪ್ರತಿ ಸಿಬ್ಬಂದಿಯ ಪರ 150 ರೂ ಸೇರಿಸಿ 500 ರೂಗಳನ್ನ ಭರಿಸಲಿದೆ.

ಇದನ್ನು ಓದಿ: ಈರುಳ್ಳಿ ಬೆಲೆ ದಿಢೀರ್‌ ಏರಿಕೆ; ಕ್ವಿಂಟಾಲ್​ಗೆ 500 ರೂ ಏರಿಕೆಗೆ ಗ್ರಾಹಕರು ಕಂಗಾಲು

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ ಇಲ್ಲಿಕ್ಲಿಕ್ಮಾಡಿ
Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version